top of page

ಮೈಸೂರು ದಸರಾ ಜಂಬೂಸವಾರಿಯಲ್ಲಿ ಉಡುಪಿ ಜಿಲ್ಲಾ ತಂಡಕ್ಕೆ ಮೊದಲ ಬಹುಮಾನ

  • Writer: Kudla Info
    Kudla Info
  • Oct 4
  • 1 min read
ree

ಮೈಸೂರು: ದಸರಾ ಮೆರವಣಿಗೆ ಮತ್ತು ಪಂಜಿನ ಕವಾಯತು ಉಪಸಮಿತಿಯವರು ಜಂಬೂಸವಾರಿಯಲ್ಲಿ ಅತ್ಯುತ್ತಮ ಕಲಾತಂಡಗಳಿಗೆ ಬಹುಮಾನ ಘೋಷಿಸಿದ್ದಾರೆ. ಉಡುಪಿ ಜಿಲ್ಲೆಯ ಪಡುಬೈಲೂರಿನ ನಾಗರಾಜ್ ಐತಾಳ್ ನೇತೃತ್ವದ ಹುಲಿವೇಷ ತಂಡವು ತನ್ನ ಮನಮೋಹಕ ಪ್ರದರ್ಶನದ ಮೂಲಕ ಪ್ರೇಕ್ಷಕರ ಮನಸೆಳೆಯುತ್ತಾ ಪ್ರಥಮ ಸ್ಥಾನ ಪಡೆದಿದೆ. ಈ ತಂಡಕ್ಕೆ ಪ್ರಥಮ ಬಹುಮಾನವಾಗಿ ರೂ.15,000 ನಗದು ಪ್ರಶಸ್ತಿ ನೀಡಿ ಗೌರವಿಸಲಾಯಿತು

 
 
 

Comments


bottom of page