top of page

ಮಂಗಳೂರು – ತಿರುವನಂತಪುರ ವಂದೇ ಭಾರತ್‌ನಲ್ಲಿ ಇದೀಗ 20 ಬೋಗಿಗಳು

  • Writer: Kudla Info
    Kudla Info
  • Sep 7
  • 1 min read

ree

ಮಂಗಳೂರು: ಮಂಗಳೂರು – ತಿರುವನಂತಪುರ ವಂದೇ ಭಾರತ್ (20631/20632) ಎಕ್ಸ್‌ಪ್ರೆಸ್ ರೈಲುಗಾಡಿಯಲ್ಲಿ ಇನ್ಮುಂದೆ 20 ಬೋಗಿಗಳ ವ್ಯವಸ್ಥೆ ಮಾಡಲಾಗಿದೆ. ಇದುವರೆಗೆ 16 ಬೋಗಿಗಳಿದ್ದ ಈ ರೈಲು ಈಗ ಹೆಚ್ಚುವರಿ ಸಾಮರ್ಥ್ಯ ಪಡೆದುಕೊಂಡಿದ್ದು, ಒಟ್ಟು ಸೀಟುಗಳ ಸಂಖ್ಯೆ 1016ರಿಂದ 1336ಕ್ಕೆ ಏರಿಕೆಯಾಗಿದೆ. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಸಮಗ್ರ ತಪಾಸಣೆ ಬಳಿಕ ಹೊಸ ಬೋಗಿಗಳೊಂದಿಗೆ ಸಂಚಾರ ಆರಂಭವಾಗಲಿದೆ. ಚೆನ್ನೈ ಇಂಟಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ನಿರ್ಮಿತ ಅತ್ಯಾಧುನಿಕ ಮಾದರಿಯ ಈ ಬೋಗಿಗಳನ್ನು ದಕ್ಷಿಣ ರೈಲ್ವೆಗೆ ಹಸ್ತಾಂತರಿಸಲಾಗಿದೆ. ಮಂಗಳೂರು – ತಿರುವನಂತಪುರ ಹಾಗೂ ಕಾಸರಗೋಡು – ತಿರುವನಂತಪುರ ಮಾರ್ಗಗಳಲ್ಲಿ ಓಡುತ್ತಿರುವ ಎರಡು ವಂದೇ ಭಾರತ್ ರೈಲುಗಳು ಪ್ರತಿದಿನವೂ ಭರ್ತಿಯಾಗುತ್ತಿದ್ದು, ಕೇರಳೀಯರು ಹಾಗೂ ಕಾಸರಗೋಡು ಜಿಲ್ಲೆಯ ಪ್ರಯಾಣಿಕರಿಂದ ಹೆಚ್ಚಿನ ಬೇಡಿಕೆಗೆ ತಕ್ಕಂತೆ ಬೋಗಿಗಳ ಸಂಖ್ಯೆ ಹೆಚ್ಚಳ ಮಾಡಲಾಗಿದೆ.

ree
ree
ree

 
 
 

Comments


bottom of page