top of page

ಸಿಡಿಲು ಬಡಿದು ಮನೆಗಳಿಗೆ ಹಾನಿ: ಸ್ಥಳಕ್ಕೆ ಶಾಸಕ ಡಾ. ವೈ ಭರತ್ ಶೆಟ್ಟಿ ಭೇಟಿ

  • Writer: Kudla Info
    Kudla Info
  • Oct 13
  • 1 min read
ree

ಸುರತ್ಕಲ್: ಕಾಟಿಪಳ್ಳ ಗ್ರಾಮದ ಗುರುನಗರ ಎಂಬಲ್ಲಿ ರವಿವಾರ ರಾತ್ರಿ ಸಿಡಿಲು ಬಡಿದು ಮೂವರಿಗೆ ಗಾಯವಾಗಿದ್ದರೆ, ಎರಡು ಮನೆಗಳು ಹಾನಿಗೊಂಡಿವೆ. ಇದರಲ್ಲಿ ಹರಿಯಪ್ಪ(65) ಮನೆಯಲ್ಲಿ ಅವರ ಪತ್ನಿ ಕುಸುಮ (60) ಸೊಸೆಯಂದಿರಾದ ವಿನಯ (35). ಭಾರತಿ (30)ಮೊಮ್ಮಗ ಸಚಿತ್ (5) ಅವರಿಗೆ ಸಿಡಿಲು ಬಡಿದು ಗಾಯಗೊಂಡಿದ್ದಾರೆ. ಮನೆ ಸಂಪೂರ್ಣ ಹಾನಿಗೊಂಡಿದ್ದು, ತಾತ್ಕಾಲಿಕವಾಗಿ ಮನೆಯವರನ್ನು ಸ್ಥಳಾಂತರಿಸಲಾಗಿದೆ. ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ಮಾಡಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಸಮೀಪದ ರವಿಕಲಾ ಅವರ ಮನೆಗೂ ಸಿಡಿಲು ಬಡಿದು ಹಾನಿಯಾಗಿದ್ದು ವಿದ್ಯುತ್ ವ್ಯವಸ್ಥೆ ಸುಟ್ಟು ಹೋಗಿದೆ.

ree

ಮಂಗಳೂರು ಉತ್ತರ ಶಾಸಕರಾದ ಡಾ. ಭರತ್ ಶೆಟ್ಟಿ ವೈ ಅವರು ಭೇಟಿ ನೀಡಿ ಸರ್ಕಾರದಿಂದ ಪ್ರಕೃತಿ ವಿಕೋಪದಡಿ ಪರಿಹಾರವನ್ನು ವಿತರಿಸಲು ಬೇಕಾದ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ree

ಈ ಸಂದರ್ಭದಲ್ಲಿ, ನಿಕಟ ಪೂರ್ವ ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಲಕ್ಷ್ಮೀಶೇಖರ್ ದೇವಾಡಿಗ, ಸರಿತಾ ಶಶಿಧರ್, ಶೇಖರ್ ದೇವಾಡಿಗ, ಆಪದ್ಬಾಂಧವ ಸಂಸ್ಥೆಯ ಉಮೇಶ್ ದೇವಾಡಿಗ ಇಡ್ಯಾ, ಪ್ರಶಾಂತ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

 
 
 

Comments


bottom of page