ಜಿಎಸ್‌ಟಿ ಇಳಿಕೆ ಕುರಿತು ವಿಶೇಷ ಪ್ರಚಾರ ಅಭಿಯಾನ: ಕ್ಯಾಪ್ಟನ್ ಬ್ರಿಜೇಶ್ ಚೌಟ
- Kudla Info

- Sep 25
- 1 min read

ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಘೋಷಿಸಿರುವ ಜಿಎಸ್‌ಟಿ ದರ ಇಳಿಕೆಯನ್ನು ದೇಶದ ಆರ್ಥಿಕತೆಯನ್ನು ರೂಪಿಸುವ ಪ್ರಮುಖ ಹೆಜ್ಜೆಯೆಂದು ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 20ರವರೆಗೆ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಅವರು ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ನವರಾತ್ರಿಯ ಜೊತೆಗೆ ಮುಂದಿನ ಹಬ್ಬಗಳ ಸಂಭ್ರಮಕ್ಕೆ ಜಿಎಸ್‌ಟಿ ಸುಧಾರಣೆಗಳು ಉತ್ತೇಜನ ನೀಡಿದ್ದು, ವ್ಯಾಪಾರಿಗಳು, ಉದ್ಯಮಿಗಳು ಹಾಗೂ ಗ್ರಾಹಕರು ಇದರ ಪ್ರಯೋಜನ ಪಡೆಯಲಿದ್ದಾರೆ. ಬಿಜೆಪಿ ಆರ್ಥಿಕ ಪ್ರಕೋಷ್ಟ ಸಹಯೋಗದಲ್ಲಿ ಮಾರುಕಟ್ಟೆ ಹಾಗೂ ಅಂಗಡಿಗಳಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆಯಲಿದ್ದು, ಜಿಎಸ್‌ಟಿ ಇಳಿಕೆಯಿಂದ ಖರೀದಿ ಶಕ್ತಿ ಹೆಚ್ಚಳವಾಗಿ, ಬೇಡಿಕೆ ವೃದ್ಧಿಯಾಗಲಿದ್ದು, ಉತ್ಪಾದನೆ ಮತ್ತು ಉದ್ಯೋಗಾವಕಾಶಗಳು ಹೆಚ್ಚುವ ಮೂಲಕ ದೇಶದ ಆರ್ಥಿಕ ಬೆಳವಣಿಗೆಗೆ ಚೈತನ್ಯ ಸಿಗಲಿದೆ ಎಂದು ಅವರು ವಿವರಿಸಿದರು.

GST ಪ್ರಚಾರ ಅಭಿಯಾನದ ಭಾಗವಾಗಿ ಮಂಗಳೂರಿನ ಫೋರಂ ಮಾಲ್‌ನಲ್ಲಿ ವ್ಯಾಪಾರಿಗಳೊಂದಿಗೆ ಸಂವಾದ ನಡೆಸಿ, ಬಿಜೈಯಲ್ಲಿರುವ ಟಾಟಾ ಮೋಟರ್ಸ್ ಕಾರ್ ಶೋರೂಂ ಗೆ ಭೇಟಿ ನೀಡಿ ಮಾಲೀಕರು ಹಾಗೂ ಸಿಬ್ಬಂದಿಯೊಂದಿಗೆ ಸಂಸದರು ಮಾತುಕತೆ ನಡೆಸಿದರು.






Comments