top of page

ವಿಶ್ವಸಂಸ್ಥೆ ಮಹಾಧಿವೇಶನಕ್ಕೆ ಭಾರತದಿಂದ ಸಂಸದೀಯ ನಿಯೋಗ: ಕ್ಯಾಪ್ಟನ್ ಬ್ರಿಜೇಶ್ ಚೌಟ ಸೇರಿ 15 ಮಂದಿ ಸಂಸದರು ಪಾಲ್ಗೊಳ್ಳಲು ಸಜ್ಜು

  • Writer: Kudla Info
    Kudla Info
  • Oct 7
  • 1 min read
ree

ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ 80ನೇ ಮಹಾಧಿವೇಶನದಲ್ಲಿ ಭಾಗವಹಿಸಲು ಭಾರತ ಸರ್ಕಾರವು 15 ಮಂದಿ ಸಂಸದರಿಂದ ಕೂಡಿದ ನಿಯೋಗವನ್ನು ಕಳುಹಿಸಲು ತೀರ್ಮಾನಿಸಿದೆ. ಬಿಜೆಪಿ ಸಂಸದ ಪಿ.ಪಿ. ಚೌಧರಿ ಅವರ ನೇತೃತ್ವದ ಈ ನಿಯೋಗ ಆಗಸ್ಟ್ 8ರಿಂದ 14ರವರೆಗೆ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಪಾಲ್ಗೊಳ್ಳಲಿದೆ. ಈ ನಿಯೋಗದಲ್ಲಿ ಕರ್ನಾಟಕದಿಂದ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಮುಂಬೈನಿಂದ ಉಜ್ವಲ್ ನಿಕ್ಕಂ ಸೇರಿದಂತೆ ಹಲವು ಗಣ್ಯ ಸಂಸದರು ಸೇರಿದ್ದಾರೆ, ಸಂಸದೀಯ ರಾಜತಾಂತ್ರಿಕತೆಯನ್ನು ಬಲಪಡಿಸುವ ಹಾಗೂ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಪ್ರಜಾತಾಂತ್ರಿಕ ಮೌಲ್ಯಗಳನ್ನು ಪ್ರತಿನಿಧಿಸುವ ಉದ್ದೇಶವನ್ನು ಹೊಂದಿದೆ. 2004ರ ನಂತರ ಮೊದಲ ಬಾರಿಗೆ ಇಂತಹ ಸಂಸದೀಯ ನಿಯೋಗವನ್ನು ವಿಶ್ವಸಂಸ್ಥೆ ಮಹಾಧಿವೇಶನಕ್ಕೆ ಕಳುಹಿಸಲಾಗುತ್ತಿದ್ದು, ಇದು ಭಾರತದ ಜಾಗತಿಕ ರಾಜತಾಂತ್ರಿಕ ಹಾಜರಾತಿಯನ್ನು ಮತ್ತಷ್ಟು ಬಲಪಡಿಸಲಿದೆ.

ree

ree
ree

ree

 
 
 

Comments


bottom of page