ಮಂಗಳೂರು–ಪೊಳಲಿ ನಡುವೆ ನರ್ಮ್ ಬಸ್ ಸಂಚಾರಕ್ಕೆ ಚಾಲನೆ
- Kudla Info

- Oct 3
- 1 min read

ಮಂಗಳೂರು: ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ವೈ ಅವರ ಮನವಿಯ ಮೇರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಮಂಗಳೂರು–ಪೊಳಲಿ ನಡುವೆ ನರ್ಮ್ ಬಸ್ ಸಂಚಾರಕ್ಕೆ ಚಾಲನೆ ದೊರೆತಿದೆ. ಗುರುವಾರ ಮಂಗಳೂರಿನ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಉದ್ಘಾಟನೆ ನೆರವೇರಿದ ಈ ಬಸ್ ಮಾರ್ಗವು ವಾಮಂಜೂರು–ಬೋಂಡಂತಿಲ–ಪೊಳಲಿ ಮಾರ್ಗವಾಗಿ ಓಡಾಟ ನಡೆಸಲಿದೆ. ಗ್ರಾಮೀಣ ಪ್ರದೇಶಗಳ ಸಾರ್ವಜನಿಕರ ಮನವಿಯನ್ನು ಗಮನಿಸಿ ಬಸ್ ಸೇವೆ ಪ್ರಾರಂಭವಾಗಿದ್ದು, ರಸ್ತೆ ಅಗಲ ಕಿರಿದಿರುವುದರಿಂದ ಸಣ್ಣ ಬಸ್ಸುಗಳನ್ನು ಮಾತ್ರ ಸಂಚಾರಕ್ಕೆ ಬಿಡಲಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಮಯಪಟ್ಟಿ ರೂಪಿಸಲಾಗಿದ್ದು, ಇದರ ಸದುಪಯೋಗವನ್ನು ಪಡೆಯಲು ಶಾಸಕ ಭರತ್ ಶೆಟ್ಟಿ ಕೋರಿದ್ದಾರೆ. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ಶಾಸಕರ ಶ್ರಮವನ್ನು ಶ್ಲಾಘಿಸಿ, ಉಚಿತ ಪ್ರಯಾಣ ಸೌಲಭ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಈ ಸೇವೆಯನ್ನು ಬಳಸುತ್ತಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ಬಸ್ ಸಿಬ್ಬಂದಿ, ಗ್ರಾಮಸ್ಥರು ಹಾಗೂ ಪ್ರಮುಖರು ಭಾಗವಹಿಸಿದರು.








Comments