top of page

ಸಿಲಿಕಾನ್ ಬೀಚ್ ದೃಷ್ಟಿಗೆ ಹೊಸ ಬಲ - ಶಿರಾಡಿ ಘಾಟ್ ಹೈಸ್ಪೀಡ್ ಸಂಪರ್ಕಕ್ಕೆ ಹಸಿರು ನಿಶಾನೆ

  • Writer: Kudla Info
    Kudla Info
  • Oct 3
  • 1 min read
ree

ನವದೆಹಲಿ: ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಅವರು ನವದೆಹಲಿಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಉಮಾಶಂಕರ್‌ ಅವರನ್ನು ಭೇಟಿ ಮಾಡಿ, ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ರಸ್ತೆ ಮೂಲಸೌಕರ್ಯ ಯೋಜನೆಗಳ ಬಗ್ಗೆ ಚರ್ಚಿಸಿದರು. ಶಿರಾಡಿ ಘಾಟ್‌ ಮಾರ್ಗದ ಮೂಲಕ ರಸ್ತೆ ಹಾಗೂ ರೈಲು ಅಭಿವೃದ್ಧಿಗೆ ಏಕೀಕೃತ ಡಿಪಿಆರ್‌ ಸಿದ್ಧಪಡಿಸುವ ಬೇಡಿಕೆಯನ್ನು ಸಚಿವಾಲಯ ಪರಿಗಣಿಸಿದ್ದು, ರೈಲ್ವೆ ಸಚಿವಾಲಯದೊಂದಿಗೆ ಜಂಟಿಯಾಗಿ ಕಾರ್ಯಗತಗೊಳಿಸುವ ಭರವಸೆ ನೀಡಿದೆ. ಬೆಂಗಳೂರಿನಿಂದ ಮಂಗಳೂರು ಹೈಸ್ಪೀಡ್‌ ಸಂಪರ್ಕ ಖಾತ್ರಿಯಾಗಲಿದೆ. ಅಲ್ಲದೇ, ಪೋರ್ಟ್‌ ಕನೆಕ್ಟಿವಿಟಿ ರಸ್ತೆ ಹಸ್ತಾಂತರ ಹಾಗೂ ಸುಧಾರಣೆ, ಹಾಗೂ ಮಾಣಿ-ಸಂಪಾಜೆ ಫೋರ್‌ ಲೇನಿಂಗ್‌ ಯೋಜನೆಗೆ ತ್ವರಿತ ಅನುಮೋದನೆ ನೀಡುವಂತೆ ಒತ್ತಾಯಿಸಿದರು.

ಅದೇ ಸಂದರ್ಭದಲ್ಲಿ, ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಅವರು ಇಲೆಕ್ಟ್ರಾನಿಕ್ಸ್‌ ಮತ್ತು ಐಟಿ ಸಚಿವಾಲಯದ ಕಾರ್ಯದರ್ಶಿ ಎಸ್‌. ಕೃಷ್ಣನ್‌ ಅವರನ್ನು ಭೇಟಿ ಮಾಡಿ, 2026 ಫೆಬ್ರವರಿಯಲ್ಲಿ ಮಂಗಳೂರಿನಲ್ಲಿ ನಡೆಯಲಿರುವ ಟೈಕಾನ್‌ ಮಂಗಳೂರುಗೆ ಆಹ್ವಾನಿಸಿದರು. ಸಿಲಿಕಾನ್‌ ಬೀಚ್‌ ದೃಷ್ಟಿಕೋಣ ಉದ್ಯಮಿಗಳ ಶಕ್ತಿ ಹಾಗೂ ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ವೇಗ ಪಡೆದುಕೊಂಡಿದೆ ಎಂದು ಅವರು ಹೇಳಿದರು.

ree
ree

 
 
 

Comments


bottom of page