MCF CSR ಚಟುವಟಿಕೆ: ಕೃತಕ ಅಂಗ ಮತ್ತು ವೈದ್ಯಕೀಯ ಉಪಕರಣ ವಿತರಣೆ, ಫಲಾನುಭವಿಗಳಿಗೆ ಹೊಸ ಆಶಾದೀಪ
- Kudla Info

- Sep 5
- 1 min read

ಮಂಗಳೂರು ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್ ಲಿಮಿಟೆಡ್ (MCF) ಸಂಸ್ಥೆಯ 2025–26ನೇ ಸಾಲಿನ ಸಿ.ಎಸ್.ಆರ್. ಚಟುವಟಿಕೆಗಳ ಅಂಗವಾಗಿ ಕೃತಕ ಅಂಗ ಹಾಗೂ ವೈದ್ಯಕೀಯ ಉಪಕರಣಗಳ ವಿತರಣಾ ಕಾರ್ಯಕ್ರಮವು ನಡೆಯಿತು.

ಈ ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿಗಳಿಗೆ ಕೃತಕ ಕಾಲು, ವೀಲ್‌ಚೇರ್‌ಗಳನ್ನು ಹಂಚಲಾಗಿದ್ದು, ಅವರ ಮುಖದಲ್ಲಿ ನೆಮ್ಮದಿ ಮೂಡಿಸಿ, ಹೊಸ ವಿಶ್ವಾಸವನ್ನು ತುಂಬಿದೆ. ಸಾಮಾಜಿಕ ಬದ್ಧತಾ ನಿಧಿಯಡಿ ನಡೆದ ಈ ಅಭಿವೃದ್ಧಿ ಕಾರ್ಯದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಶಾಸಕ ಡಾ. ಭರತ್ ಶೆಟ್ಟಿ ವೈ ಅವರು ಭಾಗವಹಿಸಿ ಫಲಾನುಭವಿಗಳಿಗೆ ಧೈರ್ಯ ತುಂಬಿ ಪ್ರೋತ್ಸಾಹಿಸಿದರು.







Comments