ಗ್ರಾಮ ಪಂಚಾಯತ್ ಅಧ್ಯಕ್ಷೆ, ಬಿಲ್ ಕಲೆಕ್ಟರ್ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆ!
- Kudla Info

- Sep 6
- 1 min read

ಮಂಗಳೂರು, ಸೆಪ್ಟೆಂಬರ್ 6: ಗ್ರಾಮೀಣ ಮಟ್ಟದ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಪೊಲೀಸರು ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಫೀಸಾ ಮತ್ತು ಬಿಲ್ ಕಲೆಕ್ಟರ್ ವಿಲಿಯಂ ಅವರನ್ನು ಶುಕ್ರವಾರ ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಬಂಧಿಸಿದ್ದಾರೆ. ಸರ್ಕಾರಿ ಬೋರ್‌ವೆಲ್ ಯೋಜನೆಗೆ ಸಂಬಂಧಿಸಿದಂತೆ ಅರ್ಜಿದಾರನ ಅತ್ತಿಗೆಯಿಂದ 10 ಸಾವಿರ ರೂ. ಲಂಚ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಈ ಬಲೆ ಬೀಸಲಾಯಿತು. ಪೆರುವಾಯಿ ಗ್ರಾಮದ 75 ವರ್ಷದ ರೈತನು 2024ರಲ್ಲಿ ವಿಶೇಷ ಘಟಕ ಯೋಜನೆ (SCP) ಮತ್ತು ಗಿರಿಜನ ಉಪಯೋಜನೆ (TSP) ಅಡಿಯಲ್ಲಿ ಬೋರ್‌ವೆಲ್ ಸಹಾಯಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಅವನ ಹೆಸರು ಮಂಜೂರಾದ ಪಟ್ಟಿಯಿಂದ ಹೊರಗುಳಿಯಿತು. ನಂತರ 2025 ಮೇ ತಿಂಗಳಲ್ಲಿ ಮರುಅರ್ಜಿಯನ್ನು ಸಲ್ಲಿಸಿದ್ದಾಗ, ಅಧ್ಯಕ್ಷೆ ನಫೀಸಾ ಬೋರ್‌ವೆಲ್ ಮಂಜೂರಿಗಾಗಿ 10 ಸಾವಿರ ರೂ. ಪಾವತಿಸಬೇಕು ಎಂದು ಒತ್ತಾಯಿಸಿದ್ದಾಳೆ. ಹಣ ಕೊಡಲು ನಿರಾಕರಿಸಿದ ದೂರುದಾರ ಲೋಕಾಯುಕ್ತ ಪೊಲೀಸರ ಮೊರೆ ಹೋಗಿದ್ದು, ದೂರು ಆಧರಿಸಿ ಬಲೆ ಬೀಸಿದ ಪೊಲೀಸರು ಲಂಚ ಸ್ವೀಕರಿಸುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಿದರು.





Comments