ಮಂಗಳೂರು–ಸುಬ್ರಹ್ಮಣ್ಯ ರೈಲುಮಾರ್ಗ ವಿದ್ಯುತಿಕರಣ ಪೂರ್ಣ: ಸೆಪ್ಟೆಂಬರ್ 15ರಿಂದ ಎಲೆಕ್ಟ್ರಿಕ್ ಎಂಜಿನ್ ಸೇವೆ ಆರಂಭ
- Kudla Info

- Sep 14
- 1 min read

ಮಂಗಳೂರು ಸೆಂಟ್ರಲ್‌ನಿಂದ ಸುಬ್ರಹ್ಮಣ್ಯ ರಸ್ತೆವರೆಗೆ ರೈಲುಮಾರ್ಗ ವಿದ್ಯುತಿಕರಣ ಕಾಮಗಾರಿ ಪೂರ್ಣಗೊಂಡಿದ್ದು, ಸೆಪ್ಟೆಂಬರ್ 15ರಿಂದ ಈ ಮಾರ್ಗದಲ್ಲಿ ರೈಲುಗಳು ಎಲೆಕ್ಟ್ರಿಕ್ ಎಂಜಿನ್ ಮೂಲಕ ಸಂಚರಿಸಲಿವೆ. ಈ ಸಾಧನೆಯಿಂದ ಮಂಗಳೂರು–ಬೆಂಗಳೂರು ನಡುವೆ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ಓಡಿಸುವ ದಾರಿ ಕೂಡ ತೆರೆದಿದೆ. ಜೂನ್ ತಿಂಗಳಿಂದ ಸುಬ್ರಹ್ಮಣ್ಯ ರಸ್ತೆ–ಎಡಕುಮೇರಿ–ಹಾಸನ ಮಾರ್ಗದಲ್ಲಿ ವಿದ್ಯುತ್‌ಕರಣ ಕಾರ್ಯ ನಡೆಯುತ್ತಿದ್ದು, ಅದು ಪೂರ್ಣಗೊಂಡ ನಂತರ ಮಂಗಳೂರು–ಬೆಂಗಳೂರು ರೈಲುಗಳೂ ಸಂಪೂರ್ಣವಾಗಿ ಎಲೆಕ್ಟ್ರಿಕ್ ಎಂಜಿನ್ ಮೂಲಕ ಸಂಚರಿಸಲಿವೆ. ಬುಧವಾರ ಮಂಗಳೂರು–ಸುಬ್ರಹ್ಮಣ್ಯ ಮಾರ್ಗದಲ್ಲಿ ಎಲೆಕ್ಟ್ರಿಕ್ ಎಂಜಿನ್ ಯಶಸ್ವಿ ಪ್ರಯೋಗ ಸಂಚಲನ ನಡೆಸಿತು. ಪ್ರಸ್ತುತ ಮಂಗಳೂರು ಸೆಂಟ್ರಲ್‌ನಿಂದ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ-ರಾತ್ರಿ ಸಂಚರಿಸುವ ಮೂರು ಪ್ಯಾಸೆಂಜರ್ ರೈಲುಗಳು ಸೆಪ್ಟೆಂಬರ್ 15ರಿಂದ ಎಲೆಕ್ಟ್ರಿಕ್ ಎಂಜಿನ್‌ಗಳಿಗೆ ಪರಿವರ್ತಿಸಲಿವೆ.






Comments