ದೋಹಾದಲ್ಲಿ ಹಮಾಸ್ ನಾಯಕರ ಮನೆ ಮೇಲೆ ಇಸ್ರೇಲ್ ವಾಯುದಾಳಿ – ಕತಾರ್ ತೀವ್ರ ಖಂಡನೆ
- Kudla Info

- Sep 10
- 1 min read

ಕತಾರ್ ರಾಜಧಾನಿ ದೋಹಾದಲ್ಲಿ ಹಮಾಸ್ ಉಗ್ರ ಸಂಘಟನೆಯ ಹಿರಿಯ ನಾಯಕರ ವಸತಿ ಕಟ್ಟಡಗಳ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿರುವ ಘಟನೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶ ಮೂಡಿಸಿದೆ. ಗಾಜಾ ಕದನ ವಿರಾಮದ ಚರ್ಚೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ನಡೆದ ಈ ದಾಳಿಯನ್ನು IDF ಹಾಗೂ ISA ಗುರಿಯಾಗಿಸಿಕೊಂಡು ನಡೆಸಿರುವುದಾಗಿ ಇಸ್ರೇಲ್ ಖಚಿತಪಡಿಸಿದೆ. ಈ ಕ್ರಮವನ್ನು ಕತಾರ್ “ಕ್ರಿಮಿನಲ್ ದಾಳಿ” ಎಂದು ಕಿಡಿಕಾರಿದ್ದು, ಪ್ರಾದೇಶಿಕ ಭದ್ರತೆ ಮತ್ತು ಕಾನೂನು ಉಲ್ಲಂಘನೆಗೆ ಕಾರಣವಾದ ಈ ಕೃತ್ಯವನ್ನು ಸಹಿಸಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದೆ. ದೋಹಾದಲ್ಲಿ ಕ್ಷಿಪಣಿ ದಾಳಿ ವರದಿ ಹಿನ್ನೆಲೆಯಲ್ಲಿ, ಕತಾರ್‌ನ ಅಮೆರಿಕ ರಾಯಭಾರ ಕಚೇರಿ ತಮ್ಮ ಪ್ರಜೆಗಳು ಎಚ್ಚರಿಕೆ ವಹಿಸಿ ಮನೆಯಲ್ಲಿ ಇರುವಂತೆ ಸಲಹೆ ನೀಡಿದೆ.








Comments