top of page

ಏಷ್ಯಾಕಪ್‌ನಲ್ಲಿ ಪಾಕಿಸ್ತಾನ್ ವಿರುದ್ಧ ಭಾರತಕ್ಕೆ ಡಬಲ್ ವಿಜಯ

  • Writer: Kudla Info
    Kudla Info
  • Sep 22
  • 1 min read
ree

ದುಬೈ: ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನ್ ವಿರುದ್ಧ ಮತ್ತೊಮ್ಮೆ ತನ್ನ ವಿಜಯದ ಪ್ರದರ್ಶನ ತೋರಿದೆ. 14ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು. ಬಳಿಕ, ಭಾರತ ಪರ ಅಭಿಷೇಕ್ ಶರ್ಮಾ ಕೇವಲ 39 ಎಸೆತಗಳಲ್ಲಿ 74 ರನ್ ಬಾರಿಸಿ ತಂಡವನ್ನು ಭರ್ಜರಿ ಜಯದತ್ತ ಮುನ್ನಡೆಸಿದರು. ಟೀಮ್ ಇಂಡಿಯಾ 18.5 ಓವರ್ ಗಳಲ್ಲೇ 174 ರನ್ ಗಳಿಸಿ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಇದಕ್ಕೂ ಮುನ್ನ ನಡೆದ ಮೊದಲ ಸುತ್ತಿನಲ್ಲೂ ಪಾಕಿಸ್ತಾನ್ ಕೇವಲ 129 ರನ್‌ಗಳಿಗೆ ಸಿಮಿತಗೊಂಡಿದ್ದು, ಭಾರತ 15.5 ಓವರ್ಗಳಲ್ಲಿ ಗುರಿ ಚೇಸ್ ಮಾಡಿ 7 ವಿಕೆಟ್‌ಗಳಿಂದ ಗೆದ್ದಿತ್ತು. ಈ ಮೂಲಕ ಏಷ್ಯಾಕಪ್ ಇತಿಹಾಸದಲ್ಲಿ ನಡೆದ 21 ಮುಖಾಮುಖಿ ಪಂದ್ಯಗಳಲ್ಲಿ ಭಾರತ 12 ಗೆಲುವು ಸಾಧಿಸಿದ್ದು, ಪಾಕಿಸ್ತಾನ್ 6 ಪಂದ್ಯಗಳಲ್ಲಿ ಮಾತ್ರ ಜಯ ಗಳಿಸಿದೆ.

 
 
 

Comments


bottom of page