top of page

ಧರ್ಮಸ್ಥಳ ಪ್ರಕರಣ: ಬುರುಡೆ ನೀಡಿದ್ದು ವಿಠ್ಠಲ ಗೌಡ ಎಂದು ಚಿನ್ನಯ್ಯ ಹೇಳಿಕೆ!

  • Writer: Kudla Info
    Kudla Info
  • Sep 9
  • 1 min read
ree

ಧರ್ಮಸ್ಥಳ ಪ್ರಕರಣದಲ್ಲಿ ಸಾಕ್ಷ್ಯ ಸುಳ್ಳು ಹೇಳಿದ ಆರೋಪದಲ್ಲಿ ಬಂಧಿತರಾಗಿದ್ದ 45 ವರ್ಷದ ಚಿನ್ನಯ್ಯ, ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಿದ ಮೂಳೆ ಅವಶೇಷಗಳನ್ನು ಸೌಜನ್ಯಳ ಮಾವನಾದ ವಿಠ್ಠಲ ಗೌಡ ನೀಡಿದ ಎಂದು ಎಸ್ಐಟಿ ತನಿಖಾ ತಂಡಕ್ಕೆ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯ ಹಿನ್ನೆಲೆಯಲ್ಲಿ ಶನಿವಾರ ಎಸ್ಐಟಿ ವಿಠ್ಠಲ ಗೌಡ ಅವರನ್ನು ವಿಚಾರಣೆಗೊಳಪಡಿಸಿತು. ಅದಕ್ಕೂ ಮೊದಲು ಹೋರಾಟಗಾರರಾದ ಗಿರೀಶ್ ಮಟ್ಟನ್ನಾವರ, ಟಿ.ಜಯಂತ್ ಹಾಗೂ ಯೂಟ್ಯೂಬರ್ ಅಭಿಷೇಕ್ ಅವರನ್ನು ಸಹ ವಿಚಾರಣೆ ನಡೆಸಲಾಗಿತ್ತು. ಬಳಿಕ ವಿಠ್ಠಲ ಗೌಡ ಎಸ್ಐಟಿ ತಂಡವನ್ನು ಧರ್ಮಸ್ಥಳದ ಒಂದು ಸ್ಥಳಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ಮೂಳೆ ಅವಶೇಷಗಳನ್ನು ತೆಗೆದುಕೊಂಡಿದ್ದಾಗಿ ತಿಳಿಸಿದ್ದಾರೆ.

 
 
 

Comments


bottom of page