ಸುರತ್ಕಲ್ ನಲ್ಲಿ ದೀಪಾವಳಿ ಸಂಭ್ರಮ 2025: ಭಕ್ತಿ, ಸಂಸ್ಕೃತಿ ಮತ್ತು ಸಂಗೀತದ ಅದ್ದೂರಿ ಉತ್ಸವ
- Kudla Info

- Oct 12
- 1 min read

ಸುರತ್ಕಲ್: ಕರಾವಳಿ ಸೇವಾ ಪ್ರತಿಷ್ಠಾನ (ರಿ.) ಸುರತ್ಕಲ್–ಮಂಗಳೂರು ವತಿಯಿಂದ ದೀಪಾವಳಿ ಸಂಭ್ರಮ 2025 ಭವ್ಯವಾಗಿ ನಡೆಯಲಿದೆ. ಮಂಗಳೂರು ನಗರ ಉತ್ತರ ಶಾಸಕರಾದ ಡಾ. ವೈ. ಭರತ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾದ ಈ ಉತ್ಸವ ಅಕ್ಟೋಬರ್ 19, 25 ಮತ್ತು 26ರಂದು ಸುರತ್ಕಲ್ ಜಂಕ್ಷನ್ ಹಾಗೂ ಗೋವಿಂದದಾಸ ಕಾಲೇಜು ಮೈದಾನದಲ್ಲಿ ನಡೆಯಲಿದೆ.

ಅಕ್ಟೋಬರ್ 19ರಂದು ಅಂತರ್ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆ ನಡೆಯಲಿದೆ, ಮಕ್ಕಳ ಹಾಗೂ ಮುಕ್ತ ವಿಭಾಗಗಳಲ್ಲಿ ಭಜನಾ ತಂಡಗಳು ಭಾಗಿಯಾಗಬಹುದು. ಈ ಕಾರ್ಯಕ್ರಮದ ಉದ್ದೇಶ ಸ್ಥಳೀಯ ಭಜನಾ ಪರಂಪರೆಯನ್ನು ಉತ್ತೇಜಿಸುವುದು ಹಾಗೂ ಭಕ್ತಿಯ ಸಂಸ್ಕೃತಿಯನ್ನು ಮುಂದುವರಿಸುವುದಾಗಿದೆ.

ಅಕ್ಟೋಬರ್ 25 ಮತ್ತು 26ರಂದು ತುಳುನಾಡ ಫುಡ್ ಫೇರ್ 2025 ಹಾಗೂ ದೀಪಾವಳಿ ನೈಟ್ಸ್ 2025 ಕಾರ್ಯಕ್ರಮಗಳು ನಡೆಯಲಿವೆ. 400ಕ್ಕೂ ಹೆಚ್ಚು ಸಾಂಪ್ರದಾಯಿಕ ಆಹಾರ ಪದಾರ್ಥಗಳೊಂದಿಗೆ ತುಳುನಾಡಿನ ರುಚಿಯ ವೈವಿಧ್ಯತೆಯನ್ನು ತೋರಿಸುವ ಫುಡ್ ಫೇರ್‌ನಲ್ಲಿ ಸಂಗೀತ ಪ್ರದರ್ಶನಗಳು ಪ್ರೇಕ್ಷಕರನ್ನು ರಂಜಿಸಲಿವೆ.

ಜನಪ್ರಿಯ ಕಲಾವಿದರು ಸಂದೇಶ್ ಬಾಬಣ್ಣ, ಸುಪ್ರೀತ್ ಸಪಳಿಗ ಮತ್ತು ಪಲ್ಲವಿ ಪ್ರಭು ಅವರಿಂದ ಬ್ಯಾಂಡ್ ಎಕ್ಸ್ಟಸಿ ತಂಡದ ನೇರ ಸಂಗೀತ ಪ್ರದರ್ಶನ ನಡೆಯಲಿದ್ದು, ಅಕ್ಟೋಬರ್ 26ರಂದು ಸಂಜೆ 6 ಗಂಟೆಯಿಂದ ಗೋವಿಂದದಾಸ ಮೈದಾನದಲ್ಲಿ ನಡೆಯುವ ದೀಪಾವಳಿ ನೈಟ್ಸ್ 2025 ನಲ್ಲಿ ಹೇಮಂತ್, ವಿದ್ಯಾ ಸುವರ್ಣ, ಅನನ್ಯ ಪ್ರಕಾಶ್, ಜಸ್ಕರನ್ ಸಿಂಗ್ ಸೇರಿದಂತೆ ಗಣ್ಯ ಕಲಾವಿದರು ತಮ್ಮ ಸಂಗೀತ ಪ್ರದರ್ಶನ ಉತ್ಸವಕ್ಕೆ ಸೊಬಗು ನೀಡಲಿದ್ದಾರೆ.







Comments