ದಸರಾ ನಾಡಹಬ್ಬ ಎಲ್ಲರ ಹಬ್ಬ: ಸಿಎಂ ಸಿದ್ದರಾಮಯ್ಯ
- Kudla Info

- Sep 5
- 1 min read

ಮೈಸೂರು: “ದಸರಾ ನಾಡಹಬ್ಬ ಧಾರ್ಮಿಕ ಹಬ್ಬವಲ್ಲ, ಎಲ್ಲರ ಹಬ್ಬ. ಹೀಗಾಗಿ ದಸರಾ ಉದ್ಘಾಟನೆಗೆ ಲೇಖಕಿ ಮತ್ತು ಬುಕ್ಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಶ್ತಾಕ್ ಅವರನ್ನು ಆಹ್ವಾನಿಸುವುದು ಸೂಕ್ತ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮೈಸೂರು ದಸರಾ ಉದ್ಘಾಟಕರ ಆಯ್ಕೆ ವಿಷಯದಲ್ಲಿ ತಮಗೆ ಅಧಿಕಾರ ನೀಡಲಾಗಿದ್ದು, ಬಾನು ಮುಶ್ತಾಕ್ ಅವರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು. “ಹಿಂದೆ ಕವಿ ನಿಸಾರ್ ಅಹ್ಮದ್ ಕೂಡ ದಸರಾವನ್ನು ಉದ್ಘಾಟಿಸಿದ್ದಾರೆ. ನಾಡಹಬ್ಬವು ಹಿಂದೂ, ಕ್ರೈಸ್ತ, ಬೌದ್ಧ, ಜೈನ ಎಲ್ಲರಿಗೂ ಸೇರಿದ ಹಬ್ಬ. ಮಹಾರಾಜರು ಆಡಳಿತದಲ್ಲಿರದಾಗ ಹೈದರಾಲಿ, ಟಿಪ್ಪುಸುಲ್ತಾನ್ ಮತ್ತು ದಿವಾನ್ ಮಿರ್ಜಾ ಇಸ್ಮಾಯಿಲ್ ಕೂಡ ದಸರಾ ಆಚರಿಸಿದ್ದರು. ಧಾರ್ಮಿಕ ಅಂಧಭಕ್ತರು ಮಾತ್ರ ಬಾನು ಮುಶ್ತಾಕ್ ಅವರ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಇತಿಹಾಸ ತಿಳಿದುಕೊಳ್ಳುವುದು ಅವಶ್ಯ” ಎಂದು ಸಿಎಂ ಹೇಳಿದರು.







Comments