top of page

ಅಮೆರಿಕ–ಭಾರತ ಸಂಬಂಧಕ್ಕೆ ಮಹತ್ವ: ಟ್ರಂಪ್ ನಾಮನಿರ್ದೇಶಿತ ರಾಯಭಾರಿ ಸೆರ್ಜಿೊ ಗೋರ್

  • Writer: Kudla Info
    Kudla Info
  • Sep 12
  • 1 min read
ree

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿ ನಾಮನಿರ್ದೇಶಿಸಿರುವ ಸೆರ್ಜಿೊ ಗೋರ್, ಭಾರತವನ್ನು ಅಮೆರಿಕದ ಅತ್ಯಂತ ಪ್ರಮುಖ ಅಂತರಾಷ್ಟ್ರೀಯ ಸಂಬಂಧಗಳಲ್ಲಿ ಒಂದೆಂದು ಅಭಿವರ್ಣಿಸಿದ್ದಾರೆ. “ಭಾರತವು ವಿಶ್ವದಲ್ಲೇ ನಮ್ಮ ದೇಶಕ್ಕೆ ಅತ್ಯಂತ ಅಗತ್ಯವಿರುವ ಸಂಬಂಧಗಳಲ್ಲಿ ಒಂದು” ಎಂದು ಹೇಳಿರುವ ಅವರು, ದ್ವಿಪಕ್ಷೀಯ ಬಾಂಧವ್ಯವು ಭವಿಷ್ಯದಲ್ಲಿ ಇನ್ನಷ್ಟು ಬಲವಾಗಿ ಬೆಳೆದು, ಆರ್ಥಿಕತೆ, ರಕ್ಷಣಾ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ದಿಟ್ಟ ಸಹಕಾರ ಮುಂದುವರಿಯಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಹೇಳಿಕೆಯಿಂದ, ಟ್ರಂಪ್ ಆಡಳಿತ ಭಾರತಕ್ಕೆ ನೀಡುತ್ತಿರುವ ಪ್ರಾಮುಖ್ಯತೆ ಮತ್ತೆ ಒತ್ತಿ ಹೇಳಿದಂತಾಗಿದೆ. ಹಿಂದೆ ಟ್ರಂಪ್ ಅವರು ಭಾರತವು ಮುಳುಗುತ್ತಿರುವ ದೇಶ ಎಂದು ಹೇಳಿಕೆ ನೀಡಿ ನಂತರದ ವಿದ್ಯಮಾನಗಳಿಂದ ವಿಶ್ವದಾದ್ಯಂತ ತೀವ್ರ ಮುಜುಗರಕ್ಕೆ ಗುರಿಯಾಗಿದ್ದ ಡೊನಾಲ್ಡ್ ಟ್ರಂಪ್, ಇದೀಗ ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿ ನಾಮನಿರ್ದೇಶಿಸಿರುವ ಸೆರ್ಜಿೊ ಗೋರ್ ಅವರ ಈ ಹೇಳಿಕೆಯು ಪ್ರಚಲಿತ ವಿದ್ಯಮಾನ ಹಾಗೂ ವಿಶ್ವ ರಾಜತಾಂತ್ರಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.





Comments


bottom of page